ಮಾರ್ಲಿ, ಜಾನ್ ವೈಕಾಂಟ್
1838-1923. ಇಂಗ್ಲಿಷ್ ರಾಜಕಾರಣಿ ಮತ್ತು ಬರಹಗಾರ. ಆಕ್ಸ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ, ಪತ್ರಿಕೋದ್ಯಮಿ, ಪಾರ್ಲಿಮೆಂಟ್ ಸದಸ್ಯ, ಈತ ಬರೆದ ಜೀವನಚರಿತ್ರೆಗಳಲ್ಲಿ ಬರ್ಕ್ (18670 ವಾಲ್ಟೇರ್ (1872), ರೋಸೋ (1873). ಡೀಡಿರೊ (1879) ವಾಲ್‍ಪೋಲ್ (1887) ಕ್ರಾಮ್‍ವೆಲ್ (1900) ಮತ್ತು ಗ್ಲಾಡ್‍ಸ್ಟನ್ (1903) ಮುಖ್ಯವಾದವು. ಪ್ರಬಂಧಸಂಕಲನವಲ್ಲದೆ ರೆಕಲೆಕ್‍ಷನ್ (1917) ಕೂಡ ಪ್ರಕಟವಾಗಿದೆ. ಮಾರ್ಲಿಯ ಕೃತಿಗಳಲ್ಲಿ ವಿಚಾರತ್ಮಕವಾದದ ಪ್ರಭಾವ ಕಾಣಬಹುದು. ಆನ್ ಕಾಂಪ್ರಮೈಸ್-(1874-ಸಮನ್ವಯ) ಪ್ರಸಿದ್ಧವಾದುದು. ಆತ್ಮಗೌರವದೊಡನೆ ಇತರರಿಗೆ ತೋರಿಸಬೇಕಾದ, ಮರ್ಯಾದೆಯನ್ನು ಹೊಂದಿಸುವುದು ಹೇಗೆ, ಗೌರವಯುತ ರಾಜಿ ಯಾವುದು ಗೌರವವಲ್ಲದ ರಾಜಿ ಯಾವುದು, ಇತರರ ಅಭಿಪ್ರಾಯಗಳನ್ನು ಕಡೆಗಾಣಿಸದೆ ಸ್ವತಂತ್ರ ವಿಚಾರರೀತಿಯನ್ನು ವ್ಯಕ್ತಿಯ ಜೀವನದ ಹಲವು ಕ್ಷೇತ್ರಗಳಿವೆ ಅನ್ವಯಿಸುತ್ತಾನೆ. ಸಾಮಗ್ರಿಯ ಸಂಗ್ರಹಣೆ ಬಳಕೆ ಇವುಗಳಲ್ಲಿ ಮಾರ್ಲಿಯ ಕೌಶಲ್ಯ ಮೆಚ್ಚುವಂಥದ್ದು. ಆದರೆ ಈತನ ಜೀವನಚರಿತ್ರೆಗಳಲ್ಲಿ ಆತ್ಮೀಯತೆ ಕಾಣುವುದಿಲ್ಲ. ಗದ್ಯ ಶೈಲಿ ಸ್ಪಷ್ಟವಾದುದು. ಲಲಿತವಾದುದು, ಆದರೆ ಗಹನತೆ ಇಲ್ಲ. ಮಾರ್ಲಿ ಇಂಗ್ಲಿಷ್ ಮೆನ್ ಆಫ್ ಲೆಟರ್ಸ್ ಮಾಲೆಯ ಮತ್ತು ಟ್ವೆಲ್ವ ಇಂಗ್ಲಿಷ್ ಸ್ಟೇಟ್ಸ್‍ಮನ್ ಮಾಲೆಯ ಮೊದಲ ಸಂಪಾದಕ.	
		(ಎಲ್.ಎಸ್.ಎಸ್.; ಕೆ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ